ರಚನೆ: ಶ್ರೀ ಕನಕದಾಸರು

ನಮ್ಮಮ್ಮ ಶಾರದೆ ಉಮಾಮಹೇಶ್ವರಿ 
ನಿಮ್ಮೊಳಗಿಹನ್ಯಾರಮ್ಮ

ಕಮ್ಮಗೋಲನವೈರಿ, ಸುತನಾದ ಸೊಂಡಿಲ 
ಹೆಮ್ಮೆಯ ಗಣನಾಥನೆ, ಕಣಮ್ಮ

ಮೋರೆ ಕಪ್ಪಿನ ಭಾವ
ಮೊರದಗಲದ ಕಿವಿ, ಕೋರೆ ದಾಡೆಯನ್ಯಾರಮ್ಮ
ಮೂರು ಕಣ್ಣನ ಸುತ, ಮುರಿದಿಟ್ಟ ಚಂದ್ರನ 
ಧೀರತಾ ಗಣನಾಥನೆ, ಅಮ್ಮಯ್ಯ

ಉಟ್ಟದಟ್ಟಿಯು ಬಿಗಿದುಟ್ಟ ಚಲ್ಲಣದ
ದಿಟ್ಟತಾನಿವನ್ಯಾರಮ್ಮ 
ಪಾರ್ವತಿಯ ಕುಮಾರನು
ಹೊಟ್ಟೆಯ ಗಣನಾಥನೆ, ಅಮ್ಮಯ್ಯ

ರಾಸಿ ವಿದ್ಯೆಯ ಬಲ್ಲ 
ರಮಣಿ ಹಂಬಲನೊಲ್ಲ ಭಾಷಿಗನಿವನ್ಯಾರಮ್ಮ
ಲೇಸಾಗಿ ಜನರ, ಸಲಹುವ ಕಾಗಿನೆಲೆಯಾದಿ
ಕೇಶವ ದಾಸ ಕಾಣೇ, ಅಮ್ಮಯ್ಯ

ವರ್ಗ: ಕನಕದಾಸ ಸಾಹಿತ್ಯ